Kudla City

ಪುತ್ತೂರಿನ ಮುತ್ತುಗಳು ಬೆಳೆದ ದೇವಸ್ಥಾನ

ಈ ಕೆರೆಯಲ್ಲಿ ಮುತ್ತುಗಳು ಸಿಕ್ಕಿತ್ತು ಇದೇ ಕಾರಣದಿಂದ ಪುತ್ತೂರು ಎನ್ನುವ ಊರಿಗೆ ಮುತ್ತು(ಹವಳ)ಗಳ ಊರು ಎಂದೇ ಕರೆಯಲಾಗುತ್ತದೆ. ಮುತ್ತು ಸಿಕ್ಕಿದ ಶ್ರೀಮಹಾಲಿಂಗೇಶ್ವರ ದೇವರ ಕೆರೆಯ ವಿಶೇಷತೆ ಎಂದರೆ ದೇವಳದ ಯಾವುದೇ ಪೂಜೆ ಕಾರ್ಯಕ್ಕೆ ಈ ನೀರನ್ನು ಬಳಸುತ್ತಿಲ್ಲ.

ತೀರ್ಥ ನೀಡುವ ವಿಚಾರವಾಗಲಿ ಅಥವಾ ಭಕ್ತರು ಸ್ನಾನ ಮಾಡುವುದಕ್ಕೆ ಈ ನೀರು ಬಳಕೆಯಾಗುತ್ತಿಲ್ಲ. ಇಡೀ ದ.ಕ ಅಥವಾ ರಾಜ್ಯದ ದೇವಳದ ಕೆರೆಗಳಲ್ಲಿ ಇಲ್ಲಿಯ ಕೆರೆ ಬಹಳ ವಿಶೇಷತೆಯನ್ನು ಹೊಂದಿದೆ. ಕೆರೆಯಲ್ಲಿ ಸಾಕಷ್ಟು ಸಂಖ್ಯೆಯ ಬಣ್ಣ ಬಣ್ಣದ ಮೀನುಗಳನ್ನು ನೋಡುವುದು ಭಕ್ತರ ಪಾಲಿಗಂತೂ ವಿಶೇಷತೆಯೇ ಹೌದು ಎನ್ನಬಹುದು.

ಈಗ ವಿಪರೀತ ಬಿಸಿಲು ಇರುವುದರಿಂದ ಈ ಪುಷ್ಕರಣಿಯ ಸುತ್ತಮುತ್ತ ಮೀನುಗಳಿಗಾಗಿ ಕಾರಂಜಿ ಮಾಡುವ ಮೂಲಕ ಅಮ್ಲ ಜನಕ ನೀಡುವ ಕೆಲಸವಾಗುತ್ತಿದೆ. ಅದರಲ್ಲೂ‌ ಮುಖ್ಯವಾಗಿ ಈ ಕೆರೆ ಎಂದಿಗೂ ಬತ್ತಿಲ್ಲ. ಒಟ್ಟಾಗಿ ಹೇಳುವುದಾದರೆ ಶ್ರೀಮಹಾಲಿಂಗೇಶ್ವರ ನ ಅದ್ಬುತ ಕೆಲಸಗಳಲ್ಲಿ ಈ ಕೆರೆ ಕೂಡ ಒಂದಾಗಿದೆ.

ಒಂದು ರೂಪಾಯಿಯಲ್ಲಿ ತರಕಾರಿ ಸಸಿ ನೆಡಿ

ಒಂದು ರೂಪಾಯಿಯಲ್ಲಿ ಬೆಂಡೆ, ಬದನೆ, ಅಲಸಂಡೆ ಹೀಗೆ ಯಾವುದೇ ತರಕಾರಿಯನ್ನು ಕೂಡ ಬೆಳೆಸಬಹುದು. ಅಂದಹಾಗೆ ಈ ಗಿಡಗಳನ್ನು ಬೆಳೆಸುವ ಮಂದಿ ರೈತರು ಅಲ್ಲ ಸರಕಾರಿ ಕಚೇರಿಯಲ್ಲಿ ಕೂರುವ ಅಧಿಕಾರಿಗಳೇ ಗಿಡಗಳನ್ನು ಬೆಳೆಸಿಕೊಂಡು ರೈತರಿಗೆ ನೀಡುವ ಕೆಲಸ ಮಾಡುತ್ತಿದ್ದಾರೆ.
ಹೌದು. ಬೆಳ್ತಂಗಡಿಯ ಮದ್ದಡ್ಕ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕರಾದ ಲಿಖಿತಾ ಸೇರಿದಂತೆ ಅವರ ಅಧೀನದಲ್ಲಿ ಕಾರ್ಯ ನಿರ್ವಹಣೆ ಮಾಡುವ ಇಬ್ಬರು ತೋಟಗಾರರು ಸೇರಿಕೊಂಡು ತಟ್ಟೆ(ಟ್ರೈ)ಯಲ್ಲಿ 14 ಬಗೆಯ ತರಕಾರಿ ಸಸಿಗಳನ್ನು ಬೆಳೆಸಿದ ಬಳಿಕ ಅದನ್ನು ರೈತರಿಗೆ ನೀಡುವ ಕೆಲಸ ಮಾಡುತ್ತಾರೆ. ಒಂದು ಗಿಡಕ್ಕೆ 1 ರೂ.ನಂತೆ ಮಾರಾಟ ಮಾಡಲಾಗುತ್ತದೆ. ಅದರಲ್ಲಿ 87 ಪೈಸೆ ಸಸಿಗೆ ಖರ್ಚಾದರೆ ಉಳಿದ ಮೊತ್ತ ಇಲಾಖೆಗೆ ಲಾಭವಾಗಿ ಬದಲಾಗುತ್ತದೆ.
ಮುಖ್ಯವಾಗಿ ಒಂದು ತಟ್ಟೆ(ಟ್ರೈ)ಯಲ್ಲಿ 98 ಸಸಿಗಳನ್ನು ನೆಡಲಾಗುತ್ತದೆ. ಎರೆಹುಳ ಗೊಬ್ಬರ, ಕೋಳಿ ಗೊಬ್ಬರ ಬಳಸಿಕೊಂಡು ಈ ಸಸಿಯನ್ನು ಬೆಳೆಸಲಾಗುತ್ತದೆ . ಕಳೆದ ವರ್ಷ ಒಂದೆರಡು ತರಕಾರಿ ಸಸಿಗಳಲ್ಲಿ ಈ ಪ್ರಯೋಗ ಮಾಡಲಾಗಿತ್ತು ಈ ಬಾರಿ 14 ನಾನಾ ಬಗೆಯ ತರಕಾರಿ ಸಸಿಗಳನ್ನು ಬೆಳೆಸಿಕೊಂಡು ಮಾರಾಟ ಮಾಡಲಾಗುತ್ತಿದೆ ಎನ್ನುತ್ತಾರೆ ಲಿಖಿತಾ ಅವರು.

13 ವರ್ಷದಲ್ಲಿ 150ಕ್ಕೂ ಹೆಚ್ಚು ಚಿನ್ನ ಗೆದ್ದ ಚೆನ್ನ

ನಿರಂತರ ಐದು ವರ್ಷ ಸರಣಿ ಶ್ರೇಷ್ಠ ಗೌರವ ಪಡೆದು, 13 ವರ್ಷದಲ್ಲಿ 150ಕ್ಕೂ ಅಧಿಕ ಚಿನ್ನ ಗೆಲುವಿನ ಮಹತ್ತರ ಸಾಧನೆ ಮಾಡಿದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ಅವರ ಕೊಂಡಾಟದ ಕೋಣ ಚೆನ್ನ ಕಂಬಳ ಕ್ಷೇತ್ರದಲ್ಲಿ ಮಿಂಚಿನ ಓಟಗಾರ. ಕಂಬಳದಲ್ಲಿ ಚಿನ್ನದ ಸಾಧನೆ ಮಾಡುತ್ತಿರುವ ಚೆನ್ನನಿಗೆ ಈಗ 19ರ ಹರೆಯ. ಆದರೂ ಕಂಬಳ ಕರೆಯಲ್ಲಿ ಚೆನ್ನನ ದರ್ಬಾರ್ ಈಗಲೂ ಮುಂದುವರಿದಿದೆ.
#kudlacity #kudla #kudlacity6 #mangalore #kambala #tulunadu #chenne

ಶಾಂತಿಯ ಸಂದೇಶ ಸಾರಿದ ಪುಷ್ಪ ಕಲಾಕೃತಿ

ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುವ ವಿಚಾರದಲ್ಲಿ ಸ್ವಾಮಿ ವಿವೇಕಾನಂದ, ಐಸ್ ಕ್ರೀಮ್ ಕೋನ್ ಹಾಗೂ ಶಾಂತಿ ಸಾರುವ ಪಾರಿವಾಳಗಳ ಪುಷ್ಪ ಕಲಾಕೃತಿಗಳು ಗಮನ ಸೆಳೆಯಲಿದೆ.
ಇದಕ್ಕೆ ಸರಿಸುಮಾರು 25 ಸಾವಿರ ಸೇವಂತಿ, 30 ಸಾವಿರ ಗುಲಾಬಿಗಳಿಂದ ತಯಾರಿಸಲಾಗಿದೆ. ನೆಲಮಂಗಳದಿಂದ ಸೇವಂತಿ, ಹೊಸೂರಿನಿಂದ ಗುಲಾಬಿಗಳನ್ನು ತರಿಸಿಕೊಂಡು ಇದನ್ನು ಮಾಡಲಾಗಿದೆ. ಡೈರಿ ಡೇ ಸಂಸ್ಥೆಯವರು ಈ ಬಾರಿ ಈ ಕಲಾಕೃತಿಯನ್ನು ಪ್ರಾಯೋಜಕತ್ವವನ್ನು ವಹಿಸಿದ್ದಾರೆ. ಮೂರುವರೆ ಲಕ್ಷಕ್ಕೆ ಈ ಕಲಾಕೃತಿಯ ಅರ್ಡರ್‍ವನ್ನು ನೀಡಲಾಗಿದೆ .
ಈ ಕಲಾಕೃತಿಯನ್ನು ಈ ಬಾರಿ ನಿರ್ಮಾಣ ಮಾಡಿರುವ ಉದ್ದೇಶ ಸ್ವಾಮಿ ವಿವೇಕಾನಂದರು ಶಾಂತಿಯ ಸಂದೇಶ ಸಾರಿದವರು ಕರಾವಳಿಯಲ್ಲಿ ಶಾಂತಿ, ಸಾಮರಸ್ಯದ ಅಗತ್ಯ ಇರುವುದರಿಂದ ಇದರ ಮಹತ್ವ ಜಾಸ್ತಿಯಾಗಿದೆ.
#kudla #kudlacity #kudlacity6 #mangalore #kadripark # kadri park flower exhibition

13 ವರ್ಷದಲ್ಲಿ 150ಕ್ಕೂ ಹೆಚ್ಚು ಚಿನ್ನ ಗೆದ್ದ ಚೆನ್ನ

ನಿರಂತರ ಐದು ವರ್ಷ ಸರಣಿ ಶ್ರೇಷ್ಠ ಗೌರವ ಪಡೆದು, 13 ವರ್ಷದಲ್ಲಿ 150ಕ್ಕೂ ಅಧಿಕ ಚಿನ್ನ ಗೆಲುವಿನ ಮಹತ್ತರ ಸಾಧನೆ ಮಾಡಿದ ಕೊಳಚೂರು ಕೊಂಡೆಟ್ಟು ಸುಕುಮಾರ ಶೆಟ್ಟಿ ಅವರ ಕೊಂಡಾಟದ ಕೋಣ ಚೆನ್ನ ಕಂಬಳ ಕ್ಷೇತ್ರದಲ್ಲಿ ಮಿಂಚಿನ ಓಟಗಾರ. ಕಂಬಳದಲ್ಲಿ ಚಿನ್ನದ ಸಾಧನೆ ಮಾಡುತ್ತಿರುವ ಚೆನ್ನನಿಗೆ ಈಗ 19ರ ಹರೆಯ. ಆದರೂ ಕಂಬಳ ಕರೆಯಲ್ಲಿ ಚೆನ್ನನ ದರ್ಬಾರ್ ಈಗಲೂ ಮುಂದುವರಿದಿದೆ.
#kudlacity #kudla #kudlacity6 #mangalore #kambala #tulunadu #chenne