Author: Team Kudla City

ಹೆತ್ತವರಿಗೆ ಮಕ್ಕಳೆಂದರೆ ಹೀಗಿರಬೇಕು ಕಣ್ರಿ….

ತಂದೆಗೆ ಸೈಕಲ್ ಬಿಟ್ಟರೆ ಬೇರೆ ವಾಹನ ಚಲಾಯಿಸಲು ಬರಲ್ಲ. ವಯಸ್ಸಾದ ಕಾರಣ ಸೈಕಲ್ ತುಳಿಯುವುದು ಕಷ್ಟವಾಗಿತ್ತು. ತಂದೆಗೆ ಪಕ್ಕದೂರುಗಳಿಗೆ ಸಂಚರಿಸಲು ಅನುಕೂಲವಾಗುವಂತೆ ಏನಾದರೂ ವಾಹನ ಕಂಡು ಹಿಡಿಯಬೇಕುಎಂದು ಚಿಂತಿಸಿದಾಗ ಹುಟ್ಟಿಕೊಂಡ ಹೊಸ ಆವಿಸ್ಕಾರವೇ ಬ್ಯಾಟರಿ ಬೈಸಿಕಲ್.
ಬೈಂದೂರು ತಾಲೂಕಿನ ಯೋಜನಾ ನಗರ ನಿವಾಸಿ ವಾಸುದೇವ ಆಚಾರ್ಯಹಾಗೂ ಶ್ರೀಮತಿ ಆಚಾರ್ಯ ದಂಪತಿಯ ಪುತ್ರ ಗುರುಮೂರ್ತಿ ಆಚಾರ್ಯ ಈಹೊಸ ವಾಹನ ಆವಿಷ್ಕರಿಸಿದ ಸಾಧಕ. ಪಿಯುಸಿ ತನಕ ಓದಿರುವಗುರುಮೂರ್ತಿ ಕಳೆದ 8 ವರ್ಷಗಳಿಂದ ಬೈಂದೂರಿನಲ್ಲಿ ಅಲ್ಯೂಮಿನಿಯಂ ವರ್ಕ್ಸ್ ವೃತ್ತಿ ಮಾಡಿಕೊಂಡಿದ್ದಾರೆ.
ಸಾಮಾನ್ಯವಾಗಿ ಸೈಕಲ್‌ನ್ನು ತುಳಿದು ಸವಾರಿ ಮಾಡ ಬೇಕಾ ಗುತ್ತದೆ. ಆದರೆ ಈ ಸೈಕಲ್‌ನ್ನು ತುಳಿಯ ಬೇಕಾಗಿಲ್ಲ. ಬೈಕ್‌ಗಳಂತೆ ಎಕ್ಸಲೇಟರ್‌ಕೊಟ್ಟರೆ ಸಾಕು. ಸಾಮಾನ್ಯ ಸೈಕಲ್‌ಗೆ ಸುಮಾರು 24 ವೋಲ್ಟೇಜ್ ಬ್ಯಾಟರಿ(ಪಲ್ಸರ್‌ಬೈಕ್‌ನಲ್ಲಿರುವ ಬ್ಯಾಟರಿಯ ಎರಡರಷ್ಟುಅಂದರೆ ಎರಡು ಬ್ಯಾಟರಿ) ಹಾಗೂರುಬೊಡೋ ಮೋಟಾರೊಂದನ್ನುಜೋಡಿಸಿದ್ದಾರೆ.
ಸಾಮಾನ್ಯ ಸೈಕಲ್‌ಗಳಿಗೆ ಒಂದೇ ಫ್ರೀ ವೀಲ್‌ಇದ್ದರೆ, ಈ ಸೈಕಲ್‌ಗೆ ರುಬೊಡೋ ಮೋಟಾರ್‌ತಿರುಗಲು ಅನುಕೂಲವಾಗುವಂತೆ ಮಗದೊಂದು ಫ್ರೀ ವೀಲ್‌ಅಳವಡಿಸಿದ್ದಾರೆ. ಬ್ಯಾಟರಿ ಹಾಗೂ ಮೋಟಾರ್‌ಗೆ ತಾವೇ ಸೈಡ್‌ಕವರ್ತಯಾರಿಸಿರುವುದಲ್ಲದೇ, ಹೆಡ್‌ಲೈಟ್ ಹಾರ್ನ್ ಜೋಡಿಸಿದ್ದು, ಸುಮಾರು 12ಸಾವಿರ ರೂ. ವೆಚ್ಚವಾಗಿದೆ.
ಬ್ಯಾಟರಿಯನ್ನು 4 ಗಂಟೆ ಚಾರ್ಜ್ ಮಾಡಿದರೆ, 13 ಕಿ.ಮೀ. ತನಕ ಸಂಚರಿಸಬಹುದಾಗಿದ್ದು, ಫುಲ್ ಚಾರ್ಜ್ ಮಾಡಿದರೆ 20 ಕಿ.ಮೀ. ತನಕ ಪ್ರತಿ ಗಂಟೆಗೆ 20 ಕಿ. ಮೀ. ವೇಗದಲ್ಲಿ ಸಂಚರಿಸಬಹುದು. ಒಂದು ವೇಳೆ ಮಾರ್ಗ ಮಧ್ಯೆ ಬ್ಯಾಟರಿಯ ಚಾರ್ಜ್ ಕಡಿಮೆಯಾದರೆ, ತುಳಿದುಕೊಂಡು ಸಂಚರಿಸಬಹುದು ಎನ್ನುತ್ತಾರೆ ಗುರುಮೂರ್ತಿ ಆಚಾರ್ಯ.

ಕುಡ್ಲದವರ ಒತ್ತಡಪೂರ್ಣ ಬದುಕಿಗೆ ರಿಲ್ಯಾಕ್ಸ್ ಕೊಡುವ ಕಪ್ಪಿಂಗ್ ಥೆರಪಿ

ಕುಡ್ಲದ ಸಿಟಿ ಮಂದಿ ಪ್ರತಿಯೊಂದು ಕ್ಷಣಕೂಡ ಒತ್ತಡಪೂರ್ಣ ಬದುಕಿನಲ್ಲಿಯೇ ಕಾಲ ಕಳೆಯುತ್ತಾರೆ. ಈ ಒತ್ತಡಪೂರ್ಣ ಬದುಕಿನಿಂದ ನಮ್ಮ ದೇಹಕ್ಕೆ ವಿಪರೀತವಾದ ಹಾನಿಯಾಗುತ್ತದೆ.
ಇದೇ ಹಾನಿಯಿಂದ ಕಾಯಿಲೆ ಬೇಗನೆ ಮುತ್ತಿಕೊಳ್ಳುವ ಜತೆಯಲ್ಲಿ ಸಣ್ಣ ವಯಸ್ಸಿಗೆ ದೇಹ ನಮ್ಮ ಮಾತನ್ನು ಕೇಳದ ಸ್ಥಿತಿಗೆ ಬಂದು ತಲುಪುತ್ತದೆ. ಇಂತಹ ಸಮಸ್ಯೆಯ ನಿವಾರಣೆಗೆ ಹಿಜಾಮಾದ ಕಪ್ಪಿಂಗ್ ಥೆರಪಿ ಉತ್ತಮವಾದ ಪರಿಹಾರ.
ಅದನ್ನು ಪರಿಣತರ ತಂಡದಿಂದ ಮಾಡಿಸಿದರೆ ಮಾತ್ರ ನಿಜವಾಗಿಯೂ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಮಂಗಳೂರಿನ ಕುದ್ರೋಳಿಯಲ್ಲಿರುವ ಆಯುರ್ ಹೆಲ್ತ್ ಕ್ಲಿನಿಕ್‌ನ ತಜ್ಞ ವೈದ್ಯರ ತಂಡ ಇಂತಹ ಕಾರ‍್ಯದಲ್ಲಿ ಸಾಕಷ್ಟು ಯಶಸ್ಸು ಪಡೆದಿದ್ದಾರೆ. ರೋಗಿಗಳು ಕೂಡ ಅವರನ್ನು ಹುಡುಕಿಕೊಂಡು ದೂರದ ಊರಿನಿಂದ ಬರುತ್ತಾರೆ.
ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.
ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.

ಕದ್ರಿ ಉದ್ಯಾನವನದಲ್ಲಿ ಸೋಲಾರ್ ಗಡಿಯಾರ

ಮಂಗಳೂರಿನ ಕದ್ರಿ ಉದ್ಯಾನವನಕ್ಕೆ ಹೋಗುವ ಮಂದಿಯ ಗಮನಕ್ಕೆ ಇರಲಿ. ಈಗ ಪಾರ್ಕ್‌ಗೊಂದು ವಿಶೇಷವಾದ ಗಡಿಯಾರ ಬಂದಿದೆ. ಎಸ್‌ಎಸ್ 316 ಗುಣಮಟ್ಟದ ಸ್ಟೀಲ್‌ನಿಂದ ಈ ಗಡಿಯಾರ ಹಾಗೂ ಗೋಪುರವನ್ನು ನಿರ್ಮಾಣ ಮಾಡಲಾಗಿದೆ.
ಗಡಿಯಾರದ ಗೋಪುರ 21 ಅಡಿ ಎತ್ತರವಿದೆ. ಈ ಗೋಪುರ ತುಕ್ಕು ನಿರೋಧಕವಿದೆ. ಮಳೆ, ಗಾಳಿ, ಬಿಸಿಲು ಯಾವುದಕ್ಕೂ ಈ ಗೋಪುರ ಏನೂ ಆಗೋದಿಲ್ಲ. ಇದನ್ನು ಎಚ್‌ಎಂಟಿ ಕಂಪನಿ ನಿರ್ಮಾಣ ಮಾಡಿದೆ ಎನ್ನುವುದು ವಿಶೇಷ.

ಈ ದೇವಳಕ್ಕೆ ಕಟ್ಟಡವಿಲ್ಲ ಗರ್ಭಗುಡಿಯೂ ಇಲ್ಲ !

ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಬದಲಾಗಿ ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿರುವ ಗಣಪತಿ.

ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ 2 ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು. ಹೌದು ಇದು ಬೆಳ್ತಂಗಡಿ ಕೊಕ್ಕಡದ ಸೌತಡ್ಕ ಗಣಪತಿ ದೇವಳದ ವಿಶೇಷತೆ. ಇದು ಬರೀ ದೇವಳ ಮಾತ್ರವಲ್ಲ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ.

ಡೆಂಗೆ ರೋಗಿಗೆ ಬೆಲ್ಲ, ಈರುಳ್ಳಿ ಮದ್ದಿನ ಪ್ರಯೋಗ

ಕರಾವಳಿಯ ಡೆಂಗೆಯ ಅಬ್ಬರ ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಕುಡ್ಲದಲ್ಲಿ ಡೆಂಗೆ ಜ್ವರದಿಂದ ಬಳಲುವ ಸಂಖ್ಯೆ 450 ಕ್ಕೆ ಮೀರಿ ನಿಂತಿದೆ. ಐವರು ಈಗಾಗಲೇ ಸಾವನ್ನು ಅಪ್ಪಿದ್ದಾರೆ. ಆದರೂ ಡೆಂಗೆ ಜ್ವರದ ಪ್ರಮಾಣ ತಗ್ಗುತ್ತಿಲ್ಲ.

ಖಾಸಗಿ, ಸರಕಾರಿ ಎರಡರಲ್ಲೂ ರೋಗಿಗಳು ಮಲಗುತ್ತಿದ್ದಾರೆ. ಡೆಂಗೆ ಜ್ವರದ ಬಳಿಕ ರೋಗಿಯ ರಕ್ತದ ಕಿರುಬಿಲ್ಲೆ(ಪ್ಲೇಟ್ಲೆಟ್)ಗಳ ಸಂಖ್ಯೆ ಕುಸಿತ ಕಾಣುತ್ತದೆ. ಇದಕ್ಕೆ ಔಷಧದ ಜತೆಯಲ್ಲಿ ಬೆಲ್ಲ ಹಾಗೂ ಹಸಿ ಈರುಳ್ಳಿಯನ್ನು ತಿನ್ನಬೇಕು. ಇದು ರಕ್ತದ ಕಿರುಬಿಲ್ಲೆಯ ಪ್ರಮಾಣವನ್ನು ಜಾಸ್ತಿ ಮಾಡುತ್ತದೆ. ಜತೆಗೆ ರೋಗ ನಿರೊಧಕ ಶಕ್ತಿ ಕೂಡ ಗಟ್ಟಿಯಾಗುತ್ತದೆ. ಆರ್ಯುವೇದದಲ್ಲೂ ಈ ಕುರಿತು ಉಲ್ಲೇಖವಿದೆ.