ತ್ಯಾಜ್ಯ ನಿರ್ವಹಣೆ ಈಗ ಎಲ್ಲೆಡೆ ಸಮಸ್ಯೆ ಆಗುತ್ತಿದೆ. ಮಂಗಳೂರು ಮಹಾನಗರ ಪಾಲಿಕೆ ಯಂತೂ ನಿಮ್ಮ ತ್ಯಾಜ್ಯ ನಿಮ್ಮ ಜವಾಬ್ದಾರಿ ಎನ್ನುವ ಮಾತನ್ನು ಹೇಳುತ್ತಿದೆ. ಕುಡ್ಲದಲ್ಲಿ ಬದುಕುವ ಮುಕ್ಕಾಲು ಮಂದಿ ಪ್ಲ್ಯಾಟ್ ನಲ್ಲಿಯೇ ಉಳಿದು ಬಿಟ್ಟಿದ್ದಾರೆ. ಇವರಿಗೆ ತಮ್ಮ ಮನೆಯ ತ್ಯಾಜ್ಯ ನಿರ್ವಹಣೆ ಮಾಡಲು ಇಲ್ಲೊಂದು ಸರಳ ಉಪಾಯದ ಮೂಲಕ ಉತ್ತಮವಾದ ತರಕಾರಿಯನ್ನು ಬೆಳೆಸಬಹುದು.
ಮಂಗಳಾದೇವಿ ನಗರದ ಬ್ಲ್ಯಾನಿ ಡಿಸೋಜ ತಾರಸಿ ಕೃಷಿಯಲ್ಲಿ ದೊಡ್ಡ ಹೆಸರು ಇದೇ ಕೃಷಿಯಿಂದ ವರ್ಷಕ್ಕೆ ಬರೋಬರಿ ಆದಾಯ ಪಡೆಯುತ್ತಿದ್ದಾರೆ. ಆದರೆ ಈ ಕೃಷಿಗೆ ತಮ್ಮ ಮನೆಯ ಕಿಚನ್ ವೇಸ್ಟ್ ವನ್ನು ಮಾತ್ರ ಬಳಸುತ್ತಾರೆ. ದಿನ ನಿತ್ಯ ಕಿಚನ್ ನಲ್ಲಿ ಉಳಿದ ಹಸಿ ತ್ಯಾಜ್ಯವನ್ನು ಮಿಕ್ಸಿಯಲ್ಲಿ ಹಾಕಿ ಬಳಿಕ ಅದನ್ನು ನೀರಿಗೆ ಸೇರಿಸುವ ಕೆಲಸ ಮಾಡುತ್ತಾರೆ. ಈ ನೀರನ್ನು ಅವರು ತಮ್ಮ ತರಕಾರಿ, ಹಣ್ಣುಹಂಪಲು ಹೀಗೆ ಎಲ್ಲ ಕೃಷಿಗೆ ಬಳಸುತ್ತಾರೆ ಇದು ಬಹಳ ಒಳ್ಳೆಯ ಗೊಬ್ಬರವಂತೆ ವಾಸನೆಯೂ ಬರೋದಿಲ್ಲ. ಆದರೆ ನಾನ್ ವೆಜ್ ಐಟಂಗಳನ್ನು ಮಾತ್ರ ಈ ರೀತಿ ಮಾಡಲು ಸಾಧ್ಯವಿಲ್ಲ ಆದರೆ ಉಳಿದ ಬಹಳಷ್ಟು ವಸ್ತುಗಳನ್ನು ಗೊಬ್ಬರ ಮಾಡಬಹುದು.