ಪ್ಲಾಸ್ಟಿಕ್ ಎಂದಾದರೂ ಬಿಸಿನೀರಿನಲ್ಲಿ ಕರಗುತ್ತಾ….ಎಲ್ಲಾದರೂ ಕರಗಿದರು ಅದನ್ನು ನೀರಿನಂತೆ ಕುಡಿಯಬಹುದಾ…? ಈ ಎರಡು ಪ್ರಶ್ನೆಗಳನ್ನು ಕೇಳುವ ಮಂದಿಗೆ ಮಂಡೆ ಸರಿಯಿಲ್ಲ ಎಂದು ನೀವು ಭಾವಿಸಿಕೊಂಡರೆ ಅದು ನಿಮ್ಮ ತಪ್ಪು ಅಭಿಪ್ರಾಯ.
ಹೌದು. ಕುಡ್ಲ ಬಟ್ ಬೇಸಿಕಲಿ ಬೆಳ್ತಂಗಡಿ ಯ ಬಳ್ಳಂಜದ ಯುವ ಉದ್ಯಮಿ ಅಶ್ವಥ್ ಹೆಗ್ಡೆ ಅವರ ಎನ್ವೀ ಗ್ರೀನ್ ಎನ್ನುವ ಪ್ಲಾಸ್ಟಿಕ್ ಬಿಸಿ ನೀರಿನಲ್ಲಿ ಕರಗುತ್ತೆ ಜತೆಗೆ ಅದನ್ನುಕುಡಿದರೂ ಏನೂ ಆಗೋಲ್ಲ. ಕಾರಣ ಇದು ತರಕಾರಿ ತ್ಯಾಜ್ಯ ದಿಂದ ಮಾಡಿದ ಪ್ಲಾಸ್ಟಿಕ್. ಇತರ ಪ್ಲಾಸ್ಟಿಕ್ ಗೆ ಹೋಲಿಕೆ ಮಾಡಿದರೆ ರೇಟು ಮಾತ್ರ ಜಾಸ್ತಿ ಆದರೆ ಪರಿಸರಕ್ಕೆ ಈ ಪ್ಲಾಸ್ಟಿಕ್ ಪೂರಕವಾಗಿದೆ. ಮಂಗಳೂರಿನ ಮೀನು ಮಾರಾಟದ ಮಹಿಳೆಯೊಬ್ಬರು ನೀಡಿದ ಅಭಿಪ್ರಾಯ ಈಗ ಈ ಪ್ಲಾಸ್ಟಿಕ್ ರೂಪುಗೊಳ್ಳಲು ಕಾರಣವಾಯಿತು ಎನ್ನುವುದು ಅಶ್ವಥ್ ಅವರ ಮಾತು.