ಮುಂಬಯಿ ಕಡೆ ಹೋದರೆ ಅಲ್ಲಿ ಕಾಣಸಿಗುವ 10 ಮಂದಿಯಲ್ಲಿ ಒಬ್ಬರಾದರೂ ತುಳುವರು ಕಾಣಸಿಗುತ್ತಾರೆ. ಇದೇ ಕಾರಣದಿಂದ ಮುಂಬಯಿಯಲ್ಲಿ ಇತರ ಭಾಷೆಗಳ ಜತೆಗೆ ತುಳು ಪ್ರಾಬಲ್ಯ ಹೊಂದಿರುವ ಪ್ರದೇಶಗಳು ಇದೆ. ಇದೇ ಕಾರಣದಿಂದ ಮುಂಬಯಿಗರು ಮಾತನಾಡುವ ತುಳು ಭಾಷೆ ಕರಾವಳಿಯ ಮಂದಿಗೂ ಬಹಳ ಇಷ್ಟ. ಮುಖ್ಯವಾಗಿ ಮುಂಬಯಿ ನಗರಿಯ ಆರ್ಥಿಕ ಶಕ್ತಿಯ ಹಿಂದೆ ತುಳುವರ ಶ್ರಮವಂತೂ ಇದ್ದೇ ಇದೆ.
Category: ಹೊಸ ಸುದ್ದಿ
ರೊಸಾರಿಯೋದ ಒಂದೇ ಕ್ಯಾಂಪಸ್‌ನಲ್ಲಿ ಎಲ್ಲ ಶಿಕ್ಷಣ
ಮಂಗಳೂರಿನ ರೊಸಾರಿಯೋ ಕೆಥೆಡ್ರಲ್ ನ ಕ್ಯಾಂಪಸ್ ನೊಳಗೆ ಎಲ್ ಕೆಜಿಗೆ ಭರ್ತಿ ಯಾದರೆ ಸಾಕು. ಪದವಿ ಮುಗಿಸಿಕೊಂಡು ಹೊರಗಡೆ ಬರಬಹುದು. ಇಂತಹ ಎಲ್ಲ ಅವಕಾಶ ಇರುವ ಶಿಕ್ಷಣ ಸಂಸ್ಥೆ ಗಳು ಮಂಗಳೂರಿನಲ್ಲಿ ಸಿಗೋದು ಬಹಳ ಅಪರೂಪ. ಹೆಚ್ಚಿನ ಮಾಹಿತಿಗೆ ಸಂಪರ್ಕ ಮಾಡಿ www.rosariocollege.com
ಸೌತಡ್ಕದ ಬಯಲು ಗಣಪನ ದೇವಳ
ಈ ದೇವಸ್ಥಾನದ ವಿಶೇಷತೆ ಎಂದರೆ ಇತರ ದೇವಸ್ಥಾನಗಳಂತೆ ಈ ದೇವಸ್ಥಾನಕ್ಕೆ ಯಾವುದೇ ಕಟ್ಟಡವಿಲ್ಲ, ಗರ್ಭಗುಡಿಯಿಲ್ಲ, ಗೋಪುರವಿಲ್ಲ. ಬದಲಾಗಿ ಇದೊಂದು ಬಯಲು ಗಣಪತಿ. ತೆರೆದ ಸ್ಥಳದಲ್ಲಿರುವ ಗಣಪತಿ. ಹರಕೆ ಹೊತ್ತು ಈ ಸ್ಥಳಕ್ಕೆ ಬಂದು ಗಣಪನಲ್ಲಿ ಪ್ರಾರ್ಥಿಸಿದರೆ 2 ತಿಂಗಳೊಳಗಾಗಿ ಅವರ ಬೇಡಿಕೆ ಈಡೇರುತ್ತದಂತೆ. ಅದರ ಮರುದಿನವೇ ಈ ಕ್ಷೇತ್ರಕ್ಕೆ ಬಂದು ಗಂಟೆ ಕಟ್ಟುತ್ತಾರೆ. ಹಾಗಾಗಿ ಇಲ್ಲಿ ಸಾವಿರಾರು ಗಂಟೆಗಳನ್ನು ಕಾಣಬಹುದು. ಹೌದು ಇದು ಬೆಳ್ತಂಗಡಿ ಕೊಕ್ಕಡದ ಸೌತಡ್ಕ ಗಣಪತಿ ದೇವಳದ ವಿಶೇಷತೆ. ಇದು ಬರೀ ದೇವಳ ಮಾತ್ರವಲ್ಲ ಪ್ರವಾಸಿ ತಾಣವಾಗಿಯೂ ಗುರುತಿಸಿಕೊಂಡಿದೆ.
This is an 800 year old temple.The idol of Ganesha, worshipped in this temple, was found by cow herd boys. These innocent boys carried this idol with bhajan, pooja all along the way to the present place of worship and placed the idol under the tree. Everyday they offered Ganesha with tender cucumber as naivedya, performed prayers, chanted bhajans. Hence from then, this shrine derived the name SOWTHADKA. (In kannada Southe(Cucumber) + Adka (A vast plain). As per the hindu vasthu tradition, Temples are built with Gopuras facing towards east, idols of diety are installed. Southadka’ is a pilgrimage centre located at a distance of 3 km from Kokkada in Belthangadi Taluk of Dakshina Kannda district. The uniqueness of the place is Lord Maha Ganapathi is out in the open field without a ‘Garbha gudi’ and temple structure. It is surrounded by fascinating greeneries and open round the clock for offering prayers.
ಬುರ್ಜ್ ಖಲೀಫಾದಲ್ಲಿ ಕುಡ್ಲದ ಎಂಜಿನಿಯರ್
ಅರಬ್ ಡೆಸಾರ್ಟ್ ಲ್ಯಾಂಡ್‌ನಲ್ಲಿ ಬುರ್ಜ್ ಖಲೀಫಾ ಎದ್ದು ನಿಂತಾಗ ಇಡೀ ವಿಶ್ವವೇ ಸಣ್ಣದಾಗಿ ಹೋಗಿತ್ತು. ತಲೆ ಎತ್ತಿಕೊಂಡು ಈ ಕಟ್ಟಡವನ್ನು ನೋಡಿ ನೂತನ ತಂತ್ರಜ್ಞಾನ ರಂಗಕ್ಕೆ ಸಲಾಮ್ ಹೊಡೆದವರು ಬಹಳಷ್ಟು ಮಂದಿ ಇರಬಹುದು. ಆದರೆ ಈ ಕಟ್ಟಡದ ಬುನಾದಿ ಕಲ್ಲಿನಿಂದ ಹಿಡಿದು ತಲೆ ಎತ್ತಿ ನಿಂತ ಸಮಯದ ವರೆಗೂ ಮಂಗಳೂರಿನ ಯಂಗ್ ಎಂಜಿನಿಯರ್ ಈ ಕೆಲಸದ ಹಿಂದೆ ಇದ್ದರು. ಸುರತ್ಕಲ್ ಹೊಸಬೆಟ್ಟುವಿನ ಎಂಜಿನಿಯರ್ ಸಂದೀಪ್ ಕುಮಾರ್ ಶೆಟ್ಟಿ ಈ ಎಂಜಿನಿಯರ್. ಬುರ್ಜ್ ಖಲೀಫಾದ ವಿನ್ಯಾಸದ ಕೆಲಸವನ್ನು ಅಮೆರಿಕಾದ ಸ್ಕಿಡ್‌ಮೋರ್ ಓವಿಂಗ್ಸ್ ಮಿರಿಲ್( ಎಸ್‌ಒಎಂ)ಕಂಪನಿಗೆ ಲಭಿಸಿತ್ತು. ಅವರಲ್ಲಿ ಕಟ್ಟಡ ನಿರ್ಮಾಣ ಮಾಡುವ ಸಾಮರ್ಥ್ಯವಿತ್ತು. ಆದರೆ ದುಬಾಯಿ ಸರಕಾರದ ರೂಲ್ ಎಂದರೆ ಮಧ್ಯಪ್ರಾಚ್ಯ ದೇಶದಲ್ಲಿ ಕಟ್ಟಡ ನಿರ್ಮಾಣ ಮಾಡುವ ಕಂಪನಿಗೆ ಈ ಕೆಲಸವನ್ನು ವಹಿಸಬೇಕಿತ್ತು. ದುಬಾಯಿಯ ಮೂರು ಖ್ಯಾತ ಕಟ್ಟಡ ನಿರ್ಮಾಣ ಕಂಪನಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ನಿಲ್ಲುವ ಹೈದಾರ್ ಕನ್‌ಸಲ್‌ಟೆನ್ಸಿ ಮಿಡಲ್ ಈಸ್ಟ್ ಲಿಮಿಟೆಡ್‌ನ ಬೆನ್ನಿಗೆ ಬಿತ್ತು. ಯಾರು ಊಹಿಸಲು ಸಾಧ್ಯವಾಗದ ಬುರ್ಜ್ ಖಲೀಫಾವನ್ನು ಕಟ್ಟಿ ಕೂರಿಸಿದ್ದು ಹೈದಾರ್ ಕನ್‌ಸಲ್‌ಟೆನ್ಸಿ ತಂಡ. ಇದರಲ್ಲಿ ಯುಕೆ, ಅಮೆರಿಕ,ಸ್ವಿಜರ್‌ಲ್ಯಾಂಡ್ ದೇಶಗಳ ಎಂಜಿನಿಯರ್‌ಗಳು ಸೇರಿದಂತೆ ಕೇರಳದ 8 ಮಂದಿಯ ಜತೆಯಲ್ಲಿ ಕುಡ್ಲದ ಸಂದೀಪ್ ಏಕೈಕ ಎಂಜಿನಿಯರ್.
ಕುಡ್ಲ ಸಿಟಿಯ ಎತ್ತರದ ಕೂಳೂರು ಚರ್ಚ್
ಮಂಗಳೂರು ಸಿಟಿಯೊಳಗಿನ ಚರ್ಚ್‌ಗಳಲ್ಲಿ ಸಂತ ಅಂತೋನಿ ಚರ್ಚ್ ಕೂಳೂರು ಸಾಕಷ್ಟು ವಿಶೇಷತೆಯನ್ನು ಒಳಗೊಂಡಿದೆ. ನಗರ ಪ್ರದೇಶದೊಳಗೆ ಎತ್ತರದಲ್ಲಿ ಇರುವ ಚರ್ಚ್‌ನಲ್ಲಿ ಇದು ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಮುಖ್ಯವಾಗಿ ಹಳೆಯ ಕಾಲದಲ್ಲಿ ಕೂಳೂರು ಅಸುಪಾಸಿನಲ್ಲಿ ಮಳೆಗಾಲದಲ್ಲಿ ನೀರು ನಿಲ್ಲುವಂತಹ ಸಮಯದಲ್ಲಿ ಈ ಚರ್ಚ್ ಎಲ್ಲರಿಗೂ ಉಳಿಯಲು ನೆರವಾಗುತ್ತಿತ್ತು. ಇದರ ಜತೆಗೆ ಈ ಚರ್ಚ್‌ಗೆ ಹೋಗಿ ನಿಂತು ನೋಡಿದರೆ ಮಂಗಳೂರು ಸುಂದರವಾದ ನೋಟವನ್ನು ಸವಿಯಬಹುದು. ಅಂದಹಾಗೆ ಕೂಳೂರು ಹಳೆಯ ಚರ್ಚ್ ಕಟ್ಟಡ ಹಾಗೂ ಹೊಸ ಕಟ್ಟಡ ಎರಡು ಕೂಡ ಅದ್ಭುತವಾದ ಕಲಾ ಶೈಲಿಯನ್ನು ಒಳಗೊಂಡಿದೆ.