ಕರಾವಳಿಯ ನಾನಾ ಭಾಗದಲ್ಲಿ ಕಳೆದ ಒಂದೆರಡು ದಿನಗಳಲ್ಲಿ ಒಂಚೂರು ಮಳೆ ಬಂದು ಇಳೆಯನ್ನು ತಣ್ಣಗೆ ಮಾಡಿದ ಪ್ರಸಂಗಗಳು ನಡೆದರೆ ಮಂಗಳೂರಿನಲ್ಲಿ ಮಾತ್ರ ಮೋಡ ಕವಿದ ವಾತಾವರಣದ ಜತೆಗೆ ಮಳೆರಾಯನ ಆಟ ಮುಂಜಾನೆ ಎದ್ದು ಆಕಾಶ ನೋಡುವ ಜನರಿಗೆ ಉದಾಸೀನತೆಯ ಭಾವವನ್ನು ಮೂಡಿಸಿದೆ.
ಅಷ್ಟಕ್ಕೂ ಮಂಗಳೂರು ಸಿಟಿ ಲಿಮಿಟ್‌ನೊಳಗೆ ಕೆಲವು ಕಡೆಯಲ್ಲಿ ಮಳೆಯಾದರೆ ಕುಡ್ಲದ ಪ್ರಮುಖ ಭಾಗದಲ್ಲಿ ಮಳೆಯ ಹನಿಯೇ ಬಿದ್ದಿಲ್ಲ. ಸಿಟಿ ಜನ ಉರಿಬಿಸಿಲಿಗೆ ಬೆವರು ಸುರಿಸುತ್ತಾ ಮಂಗಳೂರಿನಲ್ಲಿ ಭರ್ಜರಿ ಒಂದು ಮಳೆ ಬರಲಿ ಎನ್ನುವ ನಿರೀಕ್ಷೆಯಲ್ಲಿ ಕಾದು ಕೂತಿದ್ದಾರೆ. ದೇವಸ್ಥಾನ, ಚರ್ಚ್‌ಗಳಲ್ಲಿ ಈಗಾಗಲೇ ಮಳೆಗಾಗಿ ವಿಶೇಷ ಪ್ರಾರ್ಥನೆಗಳು ಆರಂಭವಾಗಿದೆ. ಆದರೂ ಮಳೆರಾಯ ಮುನಿಸಿಕೊಂಡು ಸುಮ್ಮನಾಗಿ ಬಿಟ್ಟಿದ್ದಾನೆ.
ಉದಾಸೀನತೆಗೆ ದೂಡಿದ ಮಳೆರಾಯನ ಆಟ !
May 8, 2019