ಗೆದ್ದಲು ನಾಶಕ್ಕೆ ದಡ್ಡಾಲ ಮರದ ತೊಗಡೆಯ ಮೆಡಿಸಿನ್

ಕರಾವಳಿಯ ಬೆಟ್ಟ ಗುಡ್ಡಗಳಲ್ಲಿ ಹೇರಳವಾಗಿ ಬೆಳೆಯುವ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಗೆದ್ದಲು ನಾಶಕ ದ್ರಾವಣ ತಯಾರಿಸುವ ಪುತ್ತೂರಿನ ವಿದ್ಯಾರ್ಥಿನಿಯರಿಬ್ಬರ ಸಂಶೋಧನೆ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ರಜತ ಪದಕ ಗಳಿಸಿದೆ.

ಪುತ್ತೂರಿನ ಖಾಸಗಿ ಶಾಲೆಯ ವಿದ್ಯಾರ್ಥಿನಿಯರಾದ ಸ್ತುತಿ ಎಂ.ಎಸ್. ಮತ್ತು ಸಂಧ್ಯಾ ಪ್ರಭು ಈ ಸಾಧನೆ ಮಾಡಿದ ವಿದ್ಯಾರ್ಥಿನಿಯರು. ಇವರಿಬ್ಬರೂ ಅಮೆರಿಕಾದ ನ್ಯೂಯಾರ್ಕ್‌ನ ಓಸ್‌ವೆಗೊ ಯುನಿವರ್ಸಿಟಿಯಲ್ಲಿ ಜೂನ್ 17 ರಂದು ಜರುಗಿದ ಅಂತಾರಾಷ್ಟ್ರೀಯ ಮಟ್ಟದ ಜೀನಿಯಸ್ ಒಲಿಂಪಿಯಾಡ್‌ನಲ್ಲಿ ಭಾಗವಹಿಸಿ ತಮ್ಮ ಪ್ರಾಜೆಕ್ಟ್ ಮಂಡಿಸಿ ಜಾಗತಿಕ ಮಟ್ಟದಲ್ಲಿ ಸೈ ಎನಿಸಿಕೊಂಡಿದ್ದಾರೆ.

ಯಾವುದೇ ಕೃತಕ ವಸ್ತುವಾಗಲೀ, ರಾಸಾಯನಿಕವಾಗಲೀ ಬಳಸದೆ ಕೇವಲ ದಡ್ಡಾಲ ಮರದ ತೊಗಟೆಯನ್ನು ಬಳಸಿಕೊಂಡು ಅದರಿಂದ ಈ ಜಲೀಯ ಸಾರ ತಯಾರಿಸಲಾಗಿತ್ತು. ಸಾಮಾನ್ಯವಾಗಿ ಮನೆಯ ಒಳಗೆ, ಹೊರಗೆ ಕಾಣಿಸುವ ಗೆದ್ದಲುಗಳನ್ನು ಈ ಸಾರದ ಮೂಲಕ ಸುಲಭವಾಗಿ ನಿರ್ಮೂಲನೆ ಮಾಡಬಹುದಾಗಿದೆ ಮತ್ತು ಇದರಿಂದ ಪರಿಸರಕ್ಕೆ ಮತ್ತು ಆರೋಗ್ಯಕ್ಕೆ ಹಾನಿಯಿಲ್ಲ ಎಂಬುದನ್ನು ಪ್ರಾಜೆಕ್ಟ್ ಮೂಲಕ ತೋರಿಸಿಕೊಡಲಾಗಿತ್ತು.

Share