ಎರಡು ಗಂಟೆಯ ಮಳೆ ಕುಡ್ಲಕ್ಕೆ ಭಯ ಹುಟ್ಟಿಸಿತು !

ಬರೀ ಎರಡು ಗಂಟೆಯ ಮಳೆ ಮಂಗಳೂರಿಗೆ ಈ ಹಿಂದಿನ ರುದ್ರ ಮಳೆಯ ನೆನಪು ಮಾಡಿಕೊಟ್ಟಿದೆ. ಬೆಳಗ್ಗೆ 8.30ರ ಹೊತ್ತಿಗೆ ಗಟ್ಟಿಯಾಗಿ ಹಿಡಿದ ಮಳೆ ಸುಮಾರು 10ರ ತನಕನೂ ಬಿಟ್ಟು ಬಿಡದೆ ಸುರಿದಿದೆ. ಇದರ ಪರಿಣಾಮ ಮಂಗಳೂರು ಸಿಟಿಯ ಯಾವ ಮೂಲೆಯಲ್ಲೂ ಹೋದರೂ ನೀರೇ ನೀರು. ಮಳೆಯ ನಿರೀಕ್ಷೆ ಇಟ್ಟುಕೊಳ್ಳದೇ ಮೋಟಾರ್ ಸೈಕಲ್‌ನಲ್ಲಿ ಬಂದವರು ಬಸ್ ನಿಲ್ದಾಣದಲ್ಲಿ ಮಳೆ ಬಿಡಲು ಕಾದು ಕೂತ ದೃಶ್ಯಗಳು ಮಜಬೂತಾಗಿತ್ತು. ರಸ್ತೆಯ ಎಲ್ಲ ನೀರೇ ನೀರಿಗೆ ವಾಹನಗಳ ಸಂಚಾರ ಎಲ್ಲವೂ ವ್ಯತ್ಯಯ ಕಾಣಿಸಿಕೊಂಡಿತ್ತು.
tgas: rain,mangalore,kudla,citykudla,kudlacity, two whellers

Share