ದ.ಕದಲ್ಲಿ ಇನ್ನು ಆ.13ಕ್ಕೆ ಶಾಲಾ ಕಾಲೇಜು ಆರಂಭ

ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಮಳೆ ಹಾಗೂ ಪ್ರವಾಹ ಮುಂದುವರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಶಾಲೆ, ಕಾಲೇಜು ಹಾಗೂ ಸ್ನಾತಕೋತ್ತರ ಕಾಲೇಜುಗಳಿಗೆ ಆ.10ರಂದು ಕೂಡಾ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಸ್. ಆದೇಶಿಸಿದ್ದಾರೆ.
ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸದಂತೆ ಮುಂಜಾಗ್ರತೆ ವಹಿಸಲು ರಜೆ ಘೋಷಿಸಲಾಗಿದೆ. ಇದರ ಜತೆಯಲ್ಲಿ ಆ.11 ಭಾನುವಾರ ಹಾಗೂ ಆ.12ರಂದು ಬಕ್ರೀದ್ ಹಬ್ಬದ ಗೌಜಿ ಇರುವುದರಿಂದ ಎಲ್ಲವೂ ಮಕ್ಕಳಿಗೆ ರಜೆಯಾಗಿ ಪರಿವರ್ತನೆಯಾಗಿದೆ ಈ ಮೂಲಕ ಆ.13ರ ಬಳಿಕ ಸರಿಯಾಗಿ ಮಳೆ ಬಿಟ್ಟರೆ ಶಾಲಾ ಕಾಲೇಜು ಆರಂಭವಾಗುವ ನಿರೀಕ್ಷೆಯಿದೆ.

Share