ಹಣಕಾಸು ಸಚಿವರಿಂದ ಪದಕ ಪಡೆದ ಕುಡ್ಲದ ಮಿಶೆಲ್ !

ಕುಡ್ಲದ ನೀರುಡೆ ಕಲ್ಲಮುಂಡ್ಕೂರಿನ ಮಿಶೆಲ್ ಕ್ವೀನಿ ಡಿಕೋಸ್ತಾ ಅವರ ಕೆಲಸವನ್ನು ನೋಡಿ ಕೇಂದ್ರದ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಪದಕ ನೀಡಿ ಗೌರವಿಸಿದ್ದಾರೆ.

ಅರೇ ಯಾರಿದು ಮಿಶೆಲ್ ಎನ್ನುತ್ತೀರಾ..? ಮಿಶೆಲ್ ನೀರುಡೆಯ ಕಲ್ಲಮುಂಡ್ಕೂರಿನ ಲಾಜರಸ್ ಡಿ ಕೋಸ್ತಾ ಮತ್ತು ನ್ಯಾನ್ಸಿ ಡಿ ಕೋಸ್ತಾ ದಂಪತಿಗಳ ಎರಡನೇ ಮಗಳು. ಮೂಲತಃ ಕೃಷಿ ಕುಟುಂಬದಿಂದ ಬೆಳೆದು ಬಂದ ಹುಡುಗಿ ಮಿಶೆಲ್ 2015ರಲ್ಲಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ 387ನೇ ರ‍್ಯಾಂಕ್‌ಗಳಿಸಿಕೊಂಡು ನಾಗರಿಕ ಸೇವೆಯಲ್ಲಿ ಐಆರ್‌ಎಸ್ ಮಾಡುತ್ತಿದ್ದಾರೆ.

ಇದರ ಪಾಸಿಂಗ್ ಔಟ್ ಕಾರ‍್ಯಕ್ರಮದಲ್ಲಿ ವಿಶೇಸ ಸಾಧನೆ ಮಾಡಿದ ಮಿಶೆಲ್‌ಗೆ ಖುದ್ದು ಹಣಕಾಸು ಸಚಿವರು ಪದಕ ನೀಡಿ ಗೌರವಿಸಿದ್ದಾರೆ. ಇದು ಕುಡ್ಲದ ಪ್ರತಿಯೊಬ್ಬ ಹೆಣ್ಣು ಮಗಳು ಸಾಧನೆಗೆ ಸಂದ ಗೆಲುವು ಎನ್ನಬೇಕು. ಮಿಶೆಲ್ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಮುಗಿಸಿದವರು.

Share