ಮಂಗಳೂರು-ವಿಜಯಪುರ ನಡುವೆ ಮಂಗಳೂರು ಜಂಕ್ಷನ್ ನಿಲ್ದಾಣದಿಂದ ಮಂಗಳವಾರ ಸಂಜೆ ಆರಂಭಗೊಂಡ ಸೂಪರ್ ಫಾಸ್ಟ್ ತತ್ಕಾಲ್ ಎಕ್ಸ್‌ಪ್ರೆಸ್ ಪ್ರಥಮ ರೈಲು ಪ್ರಯಾಣಕ್ಕೆ ನಿಲ್ದಾಣದಲ್ಲಿ ಬಹಳಷ್ಟು ಮಂದಿ ಸಾಕ್ಷಿಯಾದರು. ವಿಜಯಪುರದಿಂದ ಸೋಮವಾರ ಸಂಜೆ ಹೊರಟು ಮಂಗಳವಾರ ಮಂಗಳೂರು ತಲುಪಿದ ರೈಲಿಗೆ ಹಾದಿಯುದ್ದಕ್ಕೂ ನಾನಾ ನಿಲ್ದಾಣಗಳಲ್ಲಿ ಸಂಭ್ರಮದ ಸ್ವಾಗತ ದೊರೆಯಿತು.
ಮೊದಲ ರೈಲು ಪ್ರಯಾಣದಲ್ಲಿ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಬಹಳಷ್ಟು ಮಂದಿಗೆ ಈ ರೈಲಿನ ಪ್ರಯಾಣದ ಕುರಿತು ಸರಿಯಾದ ಮಾಹಿತಿ ಇಲ್ಲದೇ ಇರುವುದರಿಂದ ಈ ರೀತಿ ನಡೆದಿದೆ. ಮುಂದೆ ದಿನ ಕಳೆದಂತೆ ಇದೆಲ್ಲವೂ ಸರಿಯಾಗಲಿದೆ ಎಂದು ಪ್ರಯಾಣಿಕರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.
ಹೊಸ ರೈಲು ಸೇವೆಯಿಂದ ಉತ್ತರ ಕರ್ನಾಟಕಕ್ಕೆ ಕನಿಷ್ಠ ಪ್ರಯಾಣ ದರದಲ್ಲಿ ಸುಲಭ ಸಂಪರ್ಕ ದೊರೆಯಲಿದೆ. ಪ್ರಸ್ತುತ ದಕ್ಷಿಣ ಕನ್ನಡ ಅಥವಾ ಉಡುಪಿ ನಗರದಿಂದ ಹುಬ್ಬಳ್ಳಿ- ಧಾರವಾಡ- ಬೆಳಗಾಂಗೆ ಯಾವುದೇ ನೇರ ರೈಲು ಸಂಪರ್ಕವಿರುವುದಿಲ್ಲ. ಹೊಸ ರೈಲಿನಿಂದ ಗದಗ, ಚಿತ್ರದುರ್ಗ, ವಿಜಾಪುರ, ಧಾರವಾಡ, ಹೈದರಾಬಾದ್, ತಿರುಪತಿ ಸಂಪರ್ಕಕ್ಕೆ ಕೂಡ ಅನುಕೂಲಕರವಾಗಿದೆ.
tgas: Vijayapura, Bijapur, Mangaluru, Hubballi, Arsikere, Hassan, Central, Karnataka, regions, coastal belt, South Western Railway, daily train
ಮಂಗಳೂರು-ವಿಜಯಪುರ ರೈಲು ಕುಡ್ಲಕ್ಕೆ ಬಂತು
November 12, 2019