ಒಂದಲ್ಲ ಎರಡಲ್ಲ ಏಳು ವರ್ಷದ ಅವಧಿಯಲ್ಲಿ ಬರೋಬರಿ 662 ಟಾಯ್ಲೆಟ್‌ಗಳ ನಿರ್ಮಾಣ ಮಾಡುವುದು ಅದು ಸುಲಭದ ಮಾತೇ ಅಲ್ಲ. ಅದರಲ್ಲೂ ತುಮಕೂರು ಹಾಗೂ ಬಳ್ಳಾರಿಯಂತಹ ಜಾಗದಲ್ಲಿ ಕರಾವಳಿಯ ಹುಡುಗಿಯೊಬ್ಬಳು ಇಂತಹ ಸಾಧನೆ ಮಾಡಿದ್ದಾರೆ ಎನ್ನುವುದು ಗಮನಿಸಬೇಕಾದ ವಿಷ್ಯಾ.
ಹೌದು. ಹೆಸರು ಭವ್ಯಾ ರಾಣಿ. ಕರ್ನಾಟಕ ಬಂಟ್ವಾಳದ ಅನಂತಾಡಿಯವರು. ಸೋಷಿಯಲ್ ವರ್ಕ್ ನಲ್ಲಿ ಆಳ್ವಾ ಕಾಲೇಜಿನಲ್ಲಿ ಸ್ನಾತಕೋತ್ತರ ಪಡೆದಿರುವ ಭವ್ಯ. 2010 ರಲ್ಲಿ ಸ್ವಸ್ತಿ ಎಂಬ ಎನ್ ಜಿ ನಲ್ಲಿ ತಮ್ಮ ವೃತ್ತಿ ಬದುಕು ಆರಂಭಿಸಿದರು. ಈ ವೇಳೆ ತಮ್ಮ ಸ್ನೇಹಿತೆ ಸಹೋದರಿ ಮದುವೆಗಾಗಿ ತುಮಕೂರಿಗೆ ಆಗಮಿಸಿದ್ದರು.
ಅಲ್ಲಿಂದ ಭವ್ಯ ವೃತ್ತಿ ಹಾಗೂ ಜೀವನವೇ ಬದಲಾಯಿತು. 30 ವರ್ಷದ ಭವ್ಯರಾಣಿ ಕಳೆದ ಏಳು ವರ್ಷಗಳಿಂದ ತುಮಕೂರು ಗ್ರಾಮ ಪಂಚಾಯಿತಿಯಲ್ಲಿ ಬಯಲು ಮುಕ್ತ ಶೌಚಕ್ಕಾಗಿ ಶ್ರಮಿಸುತ್ತಿದ್ದಾರೆ. ಸರಕಾರದ ಸಹಾಯ ಪಡೆಯದೇ ಗ್ರಾಮದ ಜನತೆಗೆ ಸ್ವಚ್ಛತೆಯ ಅರಿವು ಮೂಡಿಸುತ್ತಿದ್ದಾರೆ.
ಏಳು ವರ್ಷದಲ್ಲಿ ಭರ್ತಿ 662 ಟಾಯ್ಲೆಟ್ ಕಟ್ಟಿಸಿದ ಕುಡ್ಲದ ಪೊಣ್ಣು
April 24, 2019