Kudla City

ಕುಡ್ಲದ ಪಿಜಿ,ಹಾಸ್ಟೆಲ್ ಗಳ ಮೇಲೆ ಕಮೀಶನರ್ ಕಣ್ಣು

ಕುಡ್ಲದಲ್ಲಿ ಪಿಜಿ, ಹಾಸ್ಟೆಲ್ ಹಾಗೂ ಬಾಡಿಗೆಗೆ ಮನೆ ಕೊಡುವ ಮಂದಿ ಹಾಗೂ ಅದರಲ್ಲಿ ವಾಸ ಇರುವ ಮಂದಿ ಇನ್ನು ಮುಂದೆ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ಅವರ ಪೂರ್ಣ ಮಾಹಿತಿ ನೀಡೋದು ಕಡ್ಡಾಯ ವಾಗಲಿದೆ. ಮಂಗಳೂರು ಪೊಲೀಸ್ ಕಮೀಷನರ್ ಈಗಾಗಲೇ ಈ ಕುರಿತು ಖಡಕ್ ಸೂಚನೆ ನೀಡುವ ಮೂಲಕ ಕುಡ್ಲ ಮತ್ತಷ್ಟು ಸೇಫ್ ಝೋನ್ ಗೆ ಇಳಿಸುವ ಕೆಲಸ ಮಾಡುತ್ತಿದ್ದಾರೆ. ಕಮೀಷನರ್ ಸಂದೀಪ್ ಪಾಟೀಲ್ ಸಾಹೇಬ್ರ ಕೆಲಸಕ್ಕೆ ಎಲ್ಲೆಡೆ ಉತ್ತಮ ಅಭಿಪ್ರಾಯ ವ್ಯಕ್ತವಾಗಿದೆ.

ಕುಡ್ಲದಲ್ಲಿ ಮಾತ್ರ ಸ್ಟೇಟ್ ಬ್ಯಾಂಕ್ ನಲ್ಲಿ ಮೀನು ಸಿಗುತ್ತೆ!

ಕುಡ್ಲದ ವಿಶೇಷ ಗಳಲ್ಲಿ ಒಂದು ಎಂದು ಪರಿಗಣಿಸಿದರೆ ಮಂಗಳೂರಿನ ಮೀನು ಪ್ರಿಯರು ಅರ್ಜೆಂಟ್ ಆಗಿ ಮೀನು ತರಬೇಕಾದರೆ ಸ್ಟೇಟ್ ಬ್ಯಾಂಕ್ ಗೆ ಹೋಗಬೇಕು. ವಿಶ್ವದ ಯಾವ ಭಾಗದಲ್ಲೂ ಇಂತಹ ವಿಚಾರ ಕಾಣಸಿಗದು.
ವಿಶೇಷವಾಗಿ ಕುಡ್ಲದ ಜನರಿಗೆ ಈ ಕುರಿತು ಯಾವುದೇ ಗೊಂದಲ ಇಲ್ಲ. ಕಾರಣ ಈ ವಿಚಾರ ಅವರಿಗೆ ಹೊಸತಲ್ಲ ಆದರೆ ಕುಡ್ಲ ಬಿಟ್ಟು ಉಳಿದ ಮಂದಿಯ ಗಮನಕ್ಕೆ ಹೇಳುವುದಾದರೆ ಸ್ಟೇಟ್ ಬ್ಯಾಂಕ್ ಅಲ್ಲಿದ್ದ ಕಾರಣ ಅದಕ್ಕೆ ಈ ಹೆಸರು ಹುಟ್ಟಿತು ಎನ್ನಲಾಗುತ್ತಿದೆ. ಇದರ ಮೂಲ ಹೆಸರು ಏನಿತ್ತು ಎನ್ನುವುದು ಇಲ್ಲಿಯ ಹಿರಿಯರಿಗೆ ಗೊತ್ತಿದೆ. ಹೊಸ ಪೀಳಿಗೆಯ ಮಕ್ಕಳಿಗೆ ಅದು ಸ್ಟೇಟ್ ಬ್ಯಾಂಕ್ ಮಾತ್ರ ಅವರಿಗೆ ಅಲ್ಲಿ ಮೀನು ಜತೆಯಲ್ಲಿ ಬಸ್ ಸಿಗುವ ತಾಣವಷ್ಟೇ.

ಶಾಸಕರ ಭರವಸೆ ಮುಷ್ಕರಕ್ಕೆ ಬಿತ್ತು ಬ್ರೇಕ್ !

ಶಾಲಾ ಮಕ್ಕಳ ವಾಹನ ಚಾಲಕರ ಮೇಲಿನ ಕಿರುಕುಳವನ್ನು ವಿರೋಧಿಸಿ ಕಳೆದ ಎರಡು ದಿನಗಳಿಂದ ಶಾಲಾ ಮಕ್ಕಳ ವಾಹನ ಚಾಲಕರು ಮಂಗಳೂರಿನಲ್ಲಿ ನಡೆಸುತ್ತಿದ್ದ ಸ್ವಯಂಪ್ರೇರಿತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಂದು ಪೂರ್ಣ ವಿರಾಮ ಸಿಕ್ಕಿದೆ. ಈ ಮೂಲಕ ಜು.13 ರಿಂದ ಎಂದಿನಂತೆ ಶಾಲಾ ವಾಹನಗಳು ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಲು ರೆಡಿಯಾಗಿದೆ.

ಅಂದಹಾಗೆ ಈ ಎಲ್ಲ ಬೆಳವಣಿಗೆಯ ಹಿಂದೆ ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್ ಅವರ ಭರವಸೆ ಮಾತುಗಳೇ ಮುಷ್ಕರ ಹಿಂತೆಗೆಯುವ ಕೆಲಸಕ್ಕೆ ಸಾಥ್ ಕೊಟ್ಟಿದೆ. ಮುಖ್ಯವಾಗಿ ಶಾಲಾ ವಾಹನ ಚಾಲಕರ ಸಂಘದ ಪದಾಧಿಕಾರಿಗಳ ಜತೆಯಲ್ಲಿ ಮಾತನಾಡಿದ ಶಾಸಕರು ಈ ಬಳಿಕ ಪೊಲೀಸ್ ಕಮೀಷನರ್ ಜತೆಯಲ್ಲೂ ಈ ಕುರಿತು ಮಾತುಕತೆ ನಡೆಸುತ್ತೇನೆ. ಸಮಸ್ಯೆಗೆ ಪರಿಹಾರ ನೀಡುವ ಕಾರ‍್ಯ ಕೈಗೆತ್ತಿಕೊಂಡು ನ್ಯಾಯ ನೀಡುತ್ತೇನೆ ಎನ್ನುವ ಮಾತುಗಳೇ ಮುಷ್ಕರ ಹಿಂತೆಗೆಯಲು ಕಾರಣವಾಗಿದೆ.
ಈ ಮೂಲಕ ಮಂಗಳೂರಿನ ವಿದ್ಯಾರ್ಥಿಗಳು ಹೆತ್ತವರು ಕಳೆದ ಎರಡು ದಿನಗಳಿಂದ ಈ ಶಾಲಾ ವಾಹನಗಳು ಇಲ್ಲದೇ ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿತ್ತು.

ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ರೋಗಕ್ಕೆ ಪೂರ್ಣ ಪರಿಹಾರ

ಆಧುನಿಕ ಬದುಕಿನಲ್ಲಿ ಹೊಸ ಹೊಸ ಕಾಯಿಲೆಗಳು ಹುಟ್ಟಿಕೊಳ್ಳುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಎಲ್ಲ ಕಾಯಿಲೆಗಳಿಗೂ ಪರಿಪೂರ್ಣ ರೀತಿಯಲ್ಲಿ ದೇಹ ಪ್ರಕೃತಿಗೆ ತಕ್ಕಂತಹ ಚಿಕಿತ್ಸೆ ನೀಡುವುದು ವೈದ್ಯಲೋಕಕ್ಕೆ ಸವಾಲು.

ಆದ್ರೆ ಈ ಎಲ್ಲ ಸವಾಲುಗಳನ್ನು ಮೆಟ್ಟಿನಿಂತು ಚಿಕಿತ್ಸೆ ನೀಡುವ ಮೂಲಕ ರೋಗಿಗಳಿಗೂ ತಮ್ಮ ಬಹುಕಾಲದ ರೋಗದಿಂದ ಮುಕ್ತಿ ಪಡೆದ ಭಾವ ಮೂಡಿಸುವ ಕೆಲಸವನ್ನು ಆಯುರ್ ಹೆಲ್ತ್ ಕ್ಲಿನಿಕ್ ಮಾಡುತ್ತಿದೆ.
ಕುದ್ರೋಳಿಯ ಆಯುರ್ ಹೆಲ್ತ್ ಕ್ಲಿನಿಕ್‌ನಲ್ಲಿ ಪೂರ್ವ ಮತ್ತು ನಂತರದ ಮದುವೆ ಸಮಾಲೋಚನೆ, ಹಿಜಾಮಾ ಅಧಿಗಳು, ಬೆನ್ನುನೋವಿನ ಚಿಕಿತ್ಸೆ, ಬಂಜೆತನಕ್ಕೂ ಪರಿಹಾರ, ಶೀತ ಮತ್ತು ಜ್ವರದ ಚಿಕಿತ್ಸೆ, ಬೊಜ್ಜು ಚಿಕಿತ್ಸೆ, ಮಂಡಿ ನೋವು ಮತ್ತು ಪಾದದ ಕೀಲು ನೋವಿಗೂ ಚಿಕಿತ್ಸೆ, ತಲೆನೋವು ಮತ್ತು ಸೈನಸ್‌ಗೆ ಸಂಬಂಧಪಟ್ಟ ಚಿಕಿತ್ಸೆ ಹೀಗೆ ಅನಾರೋಗ್ಯಕ್ಕೆ ಸಂಬಂಧಪಟ್ಟಂತಹ ಎಲ್ಲ ರೀತಿಯ ಚಿಕಿತ್ಸೆಯನ್ನು ಆಯುರ್ ಕ್ಲಿನಿಕ್‌ನ ಪರಿಣತ ವೈದ್ಯರು ನೀಡುತ್ತಾರೆ.

ಮಂಗಳೂರಿನ ಕುದ್ರೋಳಿಯ ಕರ್ಬಲ ರಸ್ತೆಯ ಎಚ್.ಬಿ.ಟಿ ಶಾಮಿಯಾನ ಎದುರುಗಡೆ ಕ್ಲಿನಿಕ್ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರ ತನಕ ತೆರೆದಿರುತ್ತದೆ. ಸಂಪರ್ಕ ಮಾಡಲು 9886727569 ಹಾಗೂ 9886327569ಗೆ ಕರೆ ಮಾಡಿ ಆರೋಗ್ಯ ಸಮಸ್ಯೆಗಳಿಗೆ ಪರಿಪೂರ್ಣ ಪರಿಹಾರ.

ಕುಡ್ಲದವರಿಗೆ ಕುಚಲಕ್ಕಿ ಊಟವೇ ಮೃಷ್ಟಾನ್ !

ಕುಡ್ಲದ ಜನರು ಯಾವುದೇ ಮೂಲೆಗೆ ಹೋದರು ಕೂಡ ಅವರಿಗೆ ಕುಚಲಕ್ಕಿಯ ಊಟ ಇಲ್ಲದೇ ಏನೋ ಒಂಥರ ಸಂಕಟ ಆವರಿಸಿಕೊಂಡು ಬಿಡುತ್ತದೆ. ಊಟದ ತಟ್ಟೆಯಲ್ಲಿ ಬಿರಿಯಾನಿ ಇದ್ರು ಅದನ್ನು ಪಕ್ಕಕ್ಕೆ ಸರಿಸಿ ಕುಚಲಕ್ಕಿ ಊಟ ಉಂಡಾ ಮಾರಾಯ್ರೆ ಎಂದು ಯಾವುದೇ ಮೂಲಾಜು ಇಲ್ಲದೇ ಕೇಳಿ ಬಿಡುತ್ತಾರೆ.