ಮಂಗಳೂರಿನ ಯಾವುದೇ ಮೂಲೆಗೆ ಹೋದರೂ ಕೂಡ ಗುಣಮಟ್ಟದ ಜಿನಸಿ ಅದರಲ್ಲೂ ಬಹಳ ನ್ಯಾಯಯುತ ಬೆಲೆಯಲ್ಲಿ ಗ್ರಾಹಕರಿಗೆ ಜಿನಸು ಒದಗಿಸುವ ಮಳಿಗೆ ಎಂದರೆ ಅದು ಮಂಗಳೂರಿನ ಸೆಂಟ್ರಲ್ ಮಾರ್ಕೆಟ್‌ನಲ್ಲಿರುವ ಫಾತಿಮಾ ಸ್ಟೋರ್. ಮಂಗಳೂರಿನ ವ್ಯಾಪ್ತಿಯಲ್ಲಿ ಬಹಳ ಹಳೆಯ ಮಳಿಗೆ ಇದಾಗಿದ್ದು, ಇಲ್ಲಿನ ಸಿಬ್ಬಂದಿಗಳ ಅವಿರತ ನಗುಮೊಗದ ಸೇವೆ ಗ್ರಾಹಕರಿಗೆ ಬಹಳಷ್ಟು ಖುಷಿಕೊಡುತ್ತಿದೆ.
Kudla City
ಪಕ್ಷಿ ಸ್ನೇಹಿ ನೆಟ್‌ಗಳಿಂದ ಸಮಸ್ಯೆಗೆ ಪರಿಹಾರ
ಪ್ರಾಣಿ, ಪಕ್ಷಿಗಳಿಂದ ಏನೇ ಕಿರಿಕಿರಿಯಾದರೂ ಅದನ್ನು ಕೊಲ್ಲುವುದು ತಪ್ಪು.ಆದರೆ ಅವುಗಳನ್ನು ಉಪಾಯದಿಂದ ಓಡಿಸುವ ತಂತ್ರಗಾರಿಕೆ ಹೆಚ್ಚು ಲಾಭಕರ. ಬೆಂಗಳೂರಿನಂತಹ ನಗರದಲ್ಲಿ ಜನರ ಜತೆಗೆ ಪಾರಿವಾಳಗಳ ಸಂಖ್ಯೆ ಬಹಳಷ್ಟಿದೆ. ಸದಾ ಕಾಲ ಫ್ಲ್ಯಾಟ್, ಅಪಾರ್ಟ್‌ಮೆಂಟ್‌ನೊಳಗೆ ಈ ಪಾರಿವಾಳಗಳು ಬಂದು ಹಿಕ್ಕೆ ಹಾಕುತ್ತಾ ಗಲೀಜು ಮಾಡಿ ಹೋಗುತ್ತದೆ ಎನ್ನುವ ಮಾತುಗಳನ್ನು ಪ್ರತಿಯೊಬ್ಬರು ಹೇಳುತ್ತಾ ಹೋಗುತ್ತಾರೆ.
ಆದರೆ ಅದರ ನಿಯಂತ್ರಣಕ್ಕಂತೂ ಯಾವುದೇ ಯೋಚನೆ ಮಾಡದೇ ಗಲೀಜನ್ನು ಸ್ವಚ್ಛ ಮಾಡುವುದರಲ್ಲಿಯೇ ಕಾಲ ಕಳೆಯುತ್ತೇವೆ. ಆದರೆ ಇಂತಹ ಚಿಂತೆಯಿಂದ ದೂರವಾಗಬೇಕಾದರೆ ಅದರ ನಿಯಂತ್ರಣಕ್ಕೆ ಪಕ್ಷಿ ಸ್ನೇಹಿ ನೆಟ್‌ಗಳನ್ನು ಬಳಸಬೇಕು ಇದರಿಂದ ಪಕ್ಷಿಗಳಿಗೂ ಹಾನಿಯಿಲ್ಲ ನಿಮಗೂ ಅವುಗಳಿಂದ ಮುಕ್ತಿ ಸಿಕ್ಕಿ ಬಿಡುತ್ತದೆ. ಬಹಳ ಸುಲಭ ದರದಲ್ಲಿ ಬೆಂಗಳೂರಿನ ಯಾವುದೇ ಮೂಲೆಯಲ್ಲಾದರೂ ಇಂತಹ ನೆಟ್‌ಗಳನ್ನು ಆಳವಡಿಸಿಕೊಂಡು ಹೋಗುವ ತಂಡವಿದೆ.
ಬೆಂಗಳೂರಿನ ಯಶವಂತಪುರದಲ್ಲಿರುವ ಮಂಜುನಾಥ ಎಂಟರ್‌ಪ್ರೈಸಸ್‌ನ ಉತ್ಸಾಹಿ ಯುವಕ ಮಂಜುನಾಥ ಅವರ ತಂಡ ಇಂತಹ ಬಾಲ್ಕನಿ ಸೇಫ್ಟಿ ನೆಟ್ಸ್, ಬರ್ಡ್ಸ್ ಪ್ರೊಟೆಕ್ಷನ್ ನೆಟ್ಸ್, ಕೋಕನಟ್ ಸೇಫ್ಟಿ ನೆಟ್ಸ್, ಬಿಲ್ಡಿಂಗ್ ಸೇಫ್ಟಿ ನೆಟ್ಸ್, ಗ್ಲಾಸ್ ಸೇಫ್ಟಿ ನೆಟ್ಸ್, ಸ್ಪೋಟ್ಸ್ ನೆಟ್ಸ್, ಮಂಕಿ ಸೇಫ್ಟಿ ನೆಟ್ಸ್ ಇಂತಹ ನೆಟ್‌ಗಳಲ್ಲಿ ಕಾಣಿಸಿಕೊಳ್ಳುವ ಸಮಸ್ಯೆಗಳ ಪರಿಹಾರ ವಿಚಾರದಲ್ಲಿ ಬಹಳ ತ್ವರಿತವಾಗಿ ನಿಮ್ಮ ಮನೆ ಬಾಗಿಲಿಗೆ ಬಂದು ಅಳವಡಿಸುವ ಕಾರ‍್ಯವನ್ನು ಮಾಡುತ್ತಾರೆ.
ಬೆಂಗಳೂರಿನ ಮೂಲೆ ಮೂಲೆಯಲ್ಲೂ ಇವರ ತಂಡ ಪೂರ್ಣ ಪ್ರಮಾಣದಲ್ಲಿ ದುಡಿಯುತ್ತಿದೆ. ಮಂಜುನಾಥ್ ಅವರನ್ನು ಸಂಪರ್ಕ ಮಾಡಲು 9900827799,9916721019ತಕ್ಷಣ ಕರೆ ಮಾಡಿ ನಿಮ್ಮವರ ಭದ್ರ ಬದುಕಿಗೆ ನೀವೇ ಯೋಚಿಸಿ. ಯಾರು ಮಾಡದಂತಹ ಸಿಂಪಲ್ ಬಜೆಟ್‌ನೊಳಗೆ ನಿಮ್ಮ ಬಾಲ್ಕನಿಗೊಂದು ಹೊಸ ಅರ್ಥ ನೀಡುತ್ತಾರೆ. ಸಿಂಪಲ್ ಬಜೆಟ್ ಬಾಲ್ಕನಿ ಲುಕ್ಸ್ ಸೂಪರ್….
http://www.manjusafetynets.com/
ವಿಶ್ವದಲ್ಲಿಯೇ ಕುಡ್ಲ ಸೇಫ್ ಸಿಟಿ
ಅಮೆರಿಕದ ಚಿಕಾಗೊ ಮೂಲದ ’ಟ್ರಿಬ್ಯೂನ್’ ಪತ್ರಿಕೆಯ ಸೋದರ ಸಂಸ್ಥೆ ‘ದಿ ಡೈಲಿ ಮೇಲ್’ ಎಂಬ ಪ್ರವಾಸ ಹಾಗೂ ಆಹಾರ ಕುರಿತ ವೆಬ್‌ಸೈಟ್ 2018ರ ಅಕ್ಟೋಬರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ವಿಶ್ವದಲ್ಲಿ ಮಂಗಳೂರು 31ನೇ ಸ್ಥಾನ ಪಡೆದಿದೆ. ವೆಬ್‌ಸೈಟ್ ಪ್ರಕಾರ ಸುರಕ್ಷತೆಯ ವಿಷಯದಲ್ಲಿ ಕಡಲ ನಗರಿ ಮಂಗಳೂರು ಎಂದಿಗೂ ಸೇಫ್ ಸಿಟಿ ಎನ್ನುವ ಖ್ಯಾತಿ ಪಡೆದುಕೊಂಡಿದೆ. ವಿಶೇಷವಾಗಿ ವಿಶ್ವದ 50 ಪಟ್ಟಿಯಲ್ಲಿ ಮಂಗಳೂರು ಬಂದಿರೋದು ಇಲ್ಲಿನ ಮಂದಿಗೆ ಹೆಮ್ಮೆಯ ವಿಚಾರ ಎನ್ನಬಹುದು.
ಕುಡ್ಲದ ಹುಡುಗಿ ಪ್ರಿಯಾರ ಮುಡಿಗೆ ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟ
ಆಸೀಸ್ ನೆಲದಲ್ಲಿ ಕುಡ್ಲದ ಹುಡುಗಿಯೊಬ್ಬರು ಮಿಸ್ ಯೂನಿವರ್ಸ್ ಆಸ್ಟ್ರೇಲಿಯಾ ಕಿರೀಟವನ್ನು ಗೆದ್ದುಕೊಳ್ಳುವುದೇ ಹೆಮ್ಮೆಯ ವಿಚಾರ. ಆಸ್ಟ್ರೇಲಿಯಾದ ವಿಕ್ಟೋರಿಯಾ ಕಾನೂನು ಕಾಲೇಜಿನಲ್ಲಿ ಪದವಿ ಪಡೆದ ಕಾರ್ಕಳ ಬೇಸಿಕಲಿ ಬೆಳ್ಮಣ್ಣುವಿನ ಪ್ರಿಯಾ ಅವರು ಪ್ರಶಸ್ತಿ ಗೆದ್ದು ಬಂದಿದ್ದಾರೆ. ಅವರು ಹುಟ್ಟಿದ್ದು ಬೆಳ್ಮಣ್ಣು ಪ್ರದೇಶ ಓದು, ಬೆಳವಣಿಗೆ ಎಲ್ಲವೂ ಮಸ್ಕತ್, ಮೆಲ್ಬೋರ್ನ್‌ನಲ್ಲಿ ನಡೆದಿದೆ. ತಂದೆ, ತಾಯಿ ಇಬ್ಬರು ಕುಡ್ಲದವರು.
104 ವರ್ಷವಾದರೂ ಅವರು ಇನ್ನು ಕಾರ್ ಬಿಡ್ತಾರೆ !
ಜೀವನ ಉತ್ಸಾಹ ಅಂದರೆ ಇದೇ ಇರಬೇಕು ಮಾರಾಯ್ರೆ. ಮಂಗಳೂರಿನ ಹ್ಯಾಟ್ ಹಿಲ್ ನಿವಾಸಿ ಮೈಕಲ್ ಡಿಸೋಜ ಅವರಿಗೆ ಈಗ ಜಸ್ಟ್ 104 ವರ್ಷವಷ್ಟೆ ಆದರೆ ಈಗಲೂ ಕಾರು ಬಿಡುತ್ತಾರೆ.
ಶತಮಾನದ ಹೊಸ್ತಿಲು ದಾಟಿದರೂ ತನ್ನ ೮೫ ವರ್ಷಗಳಿಂದ ಚಾಲನೆ ಮಾಡುವ ಪ್ರವೃತ್ತಿಯನ್ನು ಇನ್ನೂ ಬಿಡಲಿಲ್ಲ ….” ನನ್ನನ್ನು ಕರೆದುಕೊಂಡು ಹೋಗಲು ದೇವರು ಗಾಡಿ ತಂದಾಗಲೇ ನಾನು ವಾಹನ ಚಾಲನೆ ಮಾಡುವುದನ್ನು ನಿಲ್ಲಿಸುತ್ತೇನೆ ಎಂದು ನಗುತ್ತಾರೆ. ಇಷ್ಟು ವರ್ಷದ ಚಾಲನೆಯಲ್ಲಿ ಒಂದು ಬಾರಿ ಮಾತ್ರ ಇವ್ರ್ ಮೇಲೆ ಫೈನ್ ಬಿದ್ದಿದೆಯಂತೆ ಊಟಿಯಲ್ಲಿ ಜನಿಸಿದ ಇವರು ನಂತರ ಕೆಲಸ ನಿಮಿತ್ತ ಮಂಗಳೂರು ಬಂದ ಇವರು ಬಳಿಕ ಇಲ್ಲಿಯೇ ನೆಲೆಸಿದರು. ಮೈಕಲ್ ಮಾಮನಿಗೊಂದು ವಿಶ್ ಇರಲಿ.