Tagged: breakfast

ಕಟೀಲು ಬ್ರಹ್ಮಕಲಶದಲ್ಲಿ ಭಟ್ಟರ ಪಾಕ ಪ್ರಾವೀಣ್ಯತೆ !

ಶ್ರೀ ಕಟೀಲು ದುರ್ಗಾಪರಮೇಶ್ವರಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಜ.22ರಿಂದ ಫೆ.3ರವರೆಗೆ ನಡೆಯಲಿದೆ.ಅಂದಹಾಗೆ ಇಷ್ಟೊಂದು ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವ ಭಕ್ತರಿಗೆ ಅಡುಗೆ ಸಿದ್ಧಮಾಡುವವರನ್ನು ನೋಡಲೇ ಬೇಕು.
ಹೌದು. ಪಾವಂಜೆಯ ಪ್ರಸಿದ್ಧ ಪಾಕತಜ್ಞ ಪಿ.ಎಸ್. ವೆಂಕಟೇಶ್ ಭಟï ಅವರ ನೇತೃತ್ವದಲ್ಲಿ ತಂಡ ಊಟದ ಅಡುಗೆಯ ಸಿದ್ಧತೆಯನ್ನು ಮಾಡುತ್ತಿದೆ. ಕಟೀಲು ಮತ್ತು ಪಾವಂಜೆ ಅಡುಗೆ ವೆಂಕಟೇಶ್ ಭಟï ಕುಟುಂಬ ಮನೆತನದ ಸಂಬಂಧ ಎರಡು ಶತಮಾನಗಳಿಗೂ ಹಳೆಯದ್ದು.
ಕಟೀಲಿನ ಆರು ಬ್ರಹ್ಮಕಲಶಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಹಿನ್ನಲೆ ಇದ್ದು ಪಿ.ಎಸï. ವೆಂಕಟೇಶï ಭಟï ಅವರ ನೇತೃತ್ವದ ತಂಡ 1986, 2007 ಹಾಗೂ ಪ್ರಸ್ತುತ 2020 ಹೀಗೆ ಮೂರನೇ ಬ್ರಹ್ಮಕಲಶೋತ್ಸವದ ಮೆಗಾ ಅನುಭವವಿದೆ. ಹಿರಿಯರಾಗಿದ್ದ ಗೋಪಾಲಕೃಷ್ಣ ಅಸ್ರಣ್ಣರ ಜತೆಗಿನ ಒಡನಾಟ ಸ್ಮರಣೀಯ. ಇನ್ನು ಊಟದ ವ್ಯವಸ್ಥೆ ನಿರ್ವಹಣೆ, ಉಪಹಾರ ಸೇರಿದಂತೆ ಸಮಗ್ರ ನಿರ್ವಹಣೆಗೆ 4ರಿಂದ 5 ಸಾವಿರ ಮಂದಿ ಸ್ವಯಂಸೇವಕರನ್ನು ದಿನವಿಡೀ ಶಿಫ್ಟ್ ಆಧಾರದಲ್ಲಿ ನಿಯೋಜಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12-1 ಗಂಟೆಯವರೆಗೂ ನಿರಂತರ ದಾಸೋಹ, ಉಪಹಾರ ವ್ಯವಸ್ಥೆ ಮಾಡಲಾಗಿದೆ. ಒಟ್ಟಿನಲ್ಲಿ ದುರ್ಗಾಪರಮೇಶ್ವರೀ ದೇವಿಯ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಅನ್ನಪೂರ್ಣೇಶ್ವರಿಯ ಸಾಕ್ಷಾತ್ಕಾರವಾಗಿದೆ ಎನ್ನಲು ಎರಡು ಮಾತಿಲ್ಲ.