ನಗರದ ರೊಜಾರಿಯೋ ಕೆಥೆಡ್ರಲ್‌ನಲ್ಲಿ 45ನೇ ಉಚಿತ ಸಾಮೂಹಿಕ ವಿವಾಹ ಸಮಾರಂಭ ಮೇ 5ರಂದು ಬೆಳಗ್ಗೆ 10ಕ್ಕೆ ನಡೆಯಲಿದೆ.
ಕೆಥೆಡ್ರಲ್‌ನ ಸಮಾಜ ಸೇವಾ ಘಟಕ ಸಂತ ವಿನ್ಸೆಂಟ್ ಪಾವ್ಲ್(ಎಸ್‌ವಿಪಿ) ಸಭಾ ಆಶ್ರಯದಲ್ಲಿ ನಡೆಯುವ ಕಾರ‍್ಯಕ್ರಮದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಮತ್ತು ಕರ್ನಾಟಕದ ವಿವಿಧ ಭಾಗಗಳ 14 ಜೋಡಿಗಳು ಭಾಗವಹಿಸಲಿವೆ. ಕಳೆದ ನಾಲ್ಕೂವರೆ ದಶಕಗಳಿಂದ ಇಲ್ಲಿ ಸಾಮೂಹಿಕ ವಿವಾಹ ಸಮಾರಂಭ ನಡೆಯುತ್ತಿದ್ದು, ಇದುವರೆಗೆ 980 ಜೋಡಿಗಳು ಭಾಗವಹಿಸಿ ಸಾಂಸಾರಿಕ ಜೀವನಕ್ಕೆ ಕಾಲಿರಿಸಿವೆ.
ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಪೀಟರ್ ಪಾವ್ಲ್ ಸಲ್ಡಾನಾ ವರು ನವ ವಧು ವರರ ವಿವಾಹ ಸಮಾರಂಭದ ಬಲಿಪೂಜೆಯ ನೇತೃತ್ವ ವಹಿಸುವರು. ಬಳಿಕ ಜರುಗುವ ಸಮಾರಂಭದಲ್ಲಿ ಅನಿವಾಸಿ ಉದ್ಯಮಿ ಐವನ್ ಎ. ಫರ್ನಾಂಡೀಸ್, ರೊಜಾರಿಯೋ ಕೆಥೆಡ್ರಲ್‌ನ ರೆಕ್ಟರ್ ಫಾ. ಜೆ.ಬಿ. ಕ್ರಾಸ್ತಾ ಭಾಗವಹಿಸಲಿದ್ದಾರೆ.