ಉರ್ವದಲ್ಲಿರುವ ಪೊಂಪೈ ಮಾತೆಯ ಪುಣ್ಯಕ್ಷೇತ್ರ ವಾರ್ಷಿಕ ಹಬ್ಬ ಮತ್ತೆ ಬಂದಿದೆ. ಡಿ. 8,2019 ರಂದು ಹಬ್ಬದ ಸಂಭ್ರಮದ ಪೂಜೆ, ಧಾರ್ಮಿಕ ಕಾರ‍್ಯಕ್ರಮಗಳು ನಡೆಯಲಿದೆ.
ವಿಶೇಷವಾಗಿ ಮಂಗಳೂರು ನಗರದೊಳಗೆ ಇರುವ ಚರ್ಚ್‌ಗಳಲ್ಲಿ ಈ ಮಾತೆಯ ಪುಣ್ಯಕ್ಷೇತ್ರಕ್ಕೆ ಸಾಕಷ್ಟು ಭಕ್ತಾದಿಗಳು ಬರುತ್ತಾರೆ. ಅಂದಹಾಗೆ ಪೊಂಪೈ ಮಾತೆ ಯಾರು ಎಂದರೆ ಯೇಸುವಿನ ತಾಯಿ ಮರಿಯಳನ್ನು ಪೊಂಪೈ ಮಾತೆ ಎಂದು ಕರೆಯಲಾಗುತ್ತದೆ.
ಇಟಲಿಯ ಪೊಂಪೈ ಕಣಿವೆ ಪ್ರದೇಶದಲ್ಲಿ ಜನರು ದೈವಭಕ್ತಿಯಾಗಲಿ, ಪರಸ್ಪರ ಕಾಳಜಿಯಾಗಲೀ ಇಲ್ಲದೆ ಅನಾಗರಿಕರಂತೆ ಬಾಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರ ಮನಪರಿವರ್ತನೆಗಾಗಿ ಬಾರ್ತೊಲೊ ಲೊಂಗೊ ಎಂಬ ಯುವ ವಕೀಲರಿಗೆ ಮಾತೆ ಮರಿಯಳು ದರ್ಶನವಿತ್ತು ಪ್ರಾರ್ಥಿಸಲು ಕರೆ ನೀಡಿದರು. ಈ ದರ್ಶನದ ನಂತರ ಪೊಂಪೈ ಊರಿನಲ್ಲಿ ಜನರ ಮನ ಪರಿವರ್ತನೆ ಯಾಯಿತು ಮತ್ತು ಊರಿಗೇ ಊರೇ ಸರಿದಾರಿಗೆ ಬಂತು.
ಪೊಂಪೈ ನಗರದಲ್ಲಿ ಮಾತೆ ಮರಿಯಳ ದರ್ಶನವಾಗಿರುವುದರಿಂದ ಆಕೆಯನ್ನು ಪೊಂಪೈ ಮಾತೆಯೆಂಬುದಾಗಿ ಕರೆಯುತ್ತಾರೆ. ಪೊಂಪೈ ಮಾತೆಯ ಭಕ್ತಿ ಪ್ರಪಂಚಾದಾದ್ಯಂತ ಹಬ್ಬಿತು. ಉರ್ವ ಚರ್ಚ್‌ನಲ್ಲಿ ಪೊಂಪೈಮಾತೆಗಾಗಿ 1895 ರಲ್ಲಿ ಒಂದು ಪೀಠವನ್ನು ಸ್ಥಾಪಿಸುವುದರ ಮುಖಾಂತರ ಪೊಂಪೈ ಮಾತೆಯ ಭಕ್ತಿ ಆರಂಭವಾಯ್ತು. 1995 ರಲ್ಲಿ ಈಗಿರುವ ಪುಣ್ಯಕ್ಶೇತ್ರದ ಕಟ್ಟಡವನ್ನು ಕಟ್ಟಲಾಯಿತು.
Tagged: Shrine
ವಿದ್ಯಾರ್ಥಿಗಳಿಂದ ಸಂತ ಆಂತೋನಿ ಆಶ್ರಮ ಭೇಟಿ
ಇಂದಿನ ವಿದ್ಯಾರ್ಥಿಗಳಿಗೆ ಆಶ್ರಮ ವಾಸಿಗಳ ಪರಿಚಯವೇ ಇರುವುದಿಲ್ಲ. ಓದು, ಕಲಿಕೆ ಜತೆಗೆ ಮೊಬೈಲ್ ಎನ್ನುವ ಜಂಗಮದೊಂದಿಗೆ ಆಟ ಬಿಟ್ಟರೆ ಉಳಿದ ಎಲ್ಲ ವಿಚಾರಗಳಲ್ಲಿಯೂ ಅವರು ಉತ್ಸಾಹ ತೋರಿಸುವುದೇ ಕಡಿಮೆ.
ಆಶ್ರಮವಾಸಿಗಳ ಬದುಕು, ಬವಣೆ, ಕಷ್ಟ- ಸುಖಗಳನ್ನು ಹತ್ತಿರದಿಂದ ನೋಡುವ ಜತೆಗೆ ಅವರ ಜತೆಯಲ್ಲಿ ಸ್ವಲ್ಪ ಕಾಲ ಕಳೆಯುವ ಈ ಮೂಲಕ ಅಶ್ರಮದಲ್ಲಿ ವಾಸವಾಗಿರುವ ಮೊಗದಲ್ಲಿ ನೆಮ್ಮದಿ ತರುವ ಕೆಲಸವೊಂದು ನಡೆದಿದೆ.
ಹೌದು. ಮಂಗಳೂರಿನ ಸಂತ ಆಂತೋನಿ ಆಶ್ರಮ ಜೆಪ್ಪುವಿಗೆ ಹ್ಯಾಟ್‌ಹಿಲ್‌ನ ಬ್ಯಾರೀಸ್ ಪಬ್ಲಿಕ್ ಸ್ಕೂಲ್‌ನ ಮೊಂಟೆಸರಿಯಿಂದ ಹತ್ತನೇ ತರಗತಿಯ ವರೆಗಿನ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಭೇಟಿ ನೀಡಿ ತಾವು ಆಶ್ರಮವಾಸಿಗಳಿಗೆ ತಂದ ಉಡುಗೊರೆಯನ್ನು ಕೊಟ್ಟು ಆಶ್ರಮವಾಸಿಗಳನ್ನು ಖುಷಿ ಪಡಿಸಿದರು.