ಮಕ್ಕಳು ಬೆಳೆಯಲೂ ನಾವೇ ಕಾರಣ, ಬೀಳಲೂ ನಾವೇ ಕಾರಣ. ಮಕ್ಕಳ ಮನಸ್ಸಿನ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವ ಸಾಮಥ್ರ್ಯ ಎಲ್ಲರಿಗೂ ಇರಬೇಕು ಎಂದು ಮಂಗಳೂರು ಬಿಜಿಎಸ್ ಸಂಸ್ಥೆಗಳ ಕಾರ್ಯದರ್ಶಿ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರ ಮಾತು.
ಅವರು ಶನಿವಾರ ಕಾವೂರಿನ ಬಿಜಿಎಸ್ ಎಜುಕೇಶನ್ ಸೆಂಟರ್‍ನಲ್ಲಿ ಶ್ರೀಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್, ಬಿಜಿಎಸ್ ಚುಂಚಾದ್ರಿ ಹಾಗೂ ಬಿಜಿಎಸ್ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಕುಡ್ಲೋತ್ಸವ 2019 ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಮೂಲಕ ಅವರ ಬೆಳವಣಿಗೆಗೆ ಪೂರಕ ಪ್ರಯತ್ನ ಸಂಸ್ಥೆಯಿಂದ ನಡೆಯುತ್ತಾ ಇದೆ. ಶಿಕ್ಷಣದ ಕ್ರಾಂತಿಯ ಬಾಲಗಂಗಾಧರನಾಥ ಸ್ವಾಮೀಜಿ ಅವರ ಕನಸನ್ನು ನಿಜಗೊಳಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದೇವೆ. ಮಕ್ಕಳು ಕೆಡುವುದಿಲ್ಲ ಅವರು ಬಿಳಿ ಹಾಳೆ ಇದ್ದ ಹಾಗೆ ನಾವು ಏನು ಗೀಚುತ್ತೇವೊ ಅದು ಅಚ್ಚಾಗುತ್ತಾ ಹೋಗುತ್ತದೆ. ಸಂಸ್ಕಾರ, ಉತ್ತಮ ಶಿಕ್ಷಣ ಹಾಗೂ ಜೀವನ ಕೌಶಲ್ಯ ಈ ಬಗೆಯಲ್ಲಿ ನಾವೇನು ನೀಡುತ್ತೇವೆಯೊ ಅದು ಎಳೆಯರ ಮನಸ್ಸಿನ ಮೇಲೆ ಪ್ರಭಾವ ಬೀರುತ್ತದೆ ಎಂದರು.
ಈ ಸಂದರ್ಭ ಮನಪಾ ಕಮೀಷನರ್ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ನಾಗಮಂಗಲ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಸಿಇಒ ಎನ್.ಎಸ್.ರಾಮೇಗೌಡ, ಎಜುಕೇಶನ್ ಸೆಂಟರ್‍ನ ವ್ಯವಸ್ಥಾಪಕ ಸುಬ್ಬ ಕಾರಡ್ಕ ಉಪಸ್ಥಿತರಿದ್ದರು.